ಗ್ರಾಮ ಒನ್ ಎಂದರೇನು?
ಗ್ರಾಮ ಒನ್ ಯೋಜನೆಯು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕ ಕೇಂದ್ರಿತ ಚಟುವಟಿಕೆಗಳಿಗೆ ಸಹಾಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಜಿ 2 ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್‌ಟಿಐ ಪ್ರಶ್ನೆಗಳು ಇತ್ಯಾದಿ ಸೇವೆಗಳನ್ನು ಒಳಗೊಂಡಿರುವ ಗ್ರಾಮ ಒನ್ ಕೇಂದ್ರಗಳು ವಾರದ ಎಲ್ಲಾ ಏಳು ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸುತ್ತವೆ.
ಗ್ರಾಮ ಒನ್ ಕೇಂದ್ರಗಳ ಕೆಲಸದ ಸಮಯ ಎಷ್ಟು?
ಗ್ರಾಮ ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸಲಿವೆ.
ನಾನು ಸರ್ಕಾರಿ ಕಚೇರಿಗೆ ಹೋಗುವ ಬದಲು ಗ್ರಾಮ ಒನ್ ಮೂಲಕ ಏಕೆ ಸೇವೆ ಪಡೆಯಬೇಕು?
ಗ್ರಾಮ ಒನ್ ಮೂಲಕ ಸೇವೆಯನ್ನು ಪಡೆಯುವ ಪ್ರಯೋಜನಗಳು: ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ಕಾಯುವ ಅಗತ್ಯವಿಲ್ಲಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.ನಾಗರಿಕರ ಅನುಕೂಲಕ್ಕಾಗಿ ಗ್ರಾಮ ಒನ್ ಕೇಂದ್ರಗಳು ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ತೆರೆದಿರುತ್ತವೆ.ನಾಗರಿಕರು ಸೇವೆಗಳನ್ನು ಪಡೆಯಲು ಉತ್ತಮ ತರಬೇತಿ ಪಡೆದ ಕಾರ್ಯನಿರ್ವಾಹಕರು ಸಹಾಯ ಮಾಡುತ್ತಾರೆ.
ಭಾನುವಾರ ತೆರೆದಿರುತ್ತದೆಯೇ?
ಹೌದು, ಇದು ಎಲ್ಲಾ ಭಾನುವಾರದಂದು ತೆರೆದಿರುತ್ತದೆ. ಕೆಲಸಕ್ಕೆ ಹೋಗುವ ಸರ್ವಜನಿಕರಿಗೆ ಕೆಲಸದ ದಿನಗಳಲ್ಲಿ ಸೇವೆ ಪಡೆಯಲು ಸಾದ್ಯವಾಗದೇ ಸರ್ಕಾರಿ ಯೋಜನೆಗಳು ಸೇವೆಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅವರಿಗೆ ಉಪಯೋಗವಾಗಲೆಂದು ಗ್ರಾಮ ಒನ್ ಕೇಂದ್ರವು ಭಾನುವಾರದಂದು ತೆರೆದಿದ್ದು ಸಾರ್ವಜನಿಕರಿಗೆ ಸೇವೆ ನೀಡುತ್ತದೆ.
ಗ್ರಾಮ ಒನ್ ಮೂಲಕ ಸೇವೆಗಳನ್ನು ಪಡೆಯಲು ನಾನು ಎಷ್ಟು ಪಾವತಿಸಬೇಕು?
ವಿನಂತಿಸಿದ ಸೇವೆಗಾಗಿ ಸೂಚಿಸಲಾದ ಇಲಾಖೆಯ ಶುಲ್ಕದೊಂದಿಗೆ ನಾಗರಿಕರಿಗೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಸರ್ಕಾರಿ ಯೋಜನೆಗಳ ಮಾಹಿತಿ ನಮಗೆ ಹೇಗೆ ತಿಳಿಯುತ್ತದೆ.
ಗ್ರಾಮ ಒನ್ ಕೇಂದ್ರದಿಂದ ಪಂಚಾಯಿತಿ ಪರಿಮಿತಿಯಲ್ಲಿನ ಸರ್ವಜನಿಕರ ಒಂದು ವಾಟ್ಸಪ್ ಗೂಪ್ ತೆರೆಯಲಾಗಿದ್ದು. ಗೂಪ್ ನಲ್ಲಿ ಸರ್ಕಾರಿ / ಸರ್ಕಾರೇತರ ಸೇವೆಗಳ ಎಲ್ಲಾ ಖಚಿತ ಮಾಹಿತಿಯನ್ನು ತಿಳಿಸಲಾಗುತ್ತದೆ.